    ಮೂಲದೊಡನೆ ಪರಿಶೀಲಿಸಿ

ಕೋಆರ್ಡಿನೇಷನ್ ಸಂಯುಕ್ತ  

ಹಲವು ಅಣುಗಳು ಅಥವಾ ಅಯಾನುಗಳು ಒಂದು ಲೋಹದ ಪರಮಾಣು ಅಥವಾ ಅಯಾನಿನ ಸುತ್ತಲೂ ಬಂಧಿತವಾದುದರ ಫಲವಾಗಿ ಉಂಟಾಗುವ ಒಂದು ಬಗೆಯ ಸಂಕೀರ್ಣ ವಸ್ತು. ಉದಾಹರಣೆಗೆ [ಅo(ಓಊ3)6]ಅಟ3.  ಇದರಲ್ಲಿ [ಅo(ಓಊ3)6]3+ ಒಂದು ಸಂಕೀರ್ಣ ಧನ ಅಯಾನು. ಹೀಗೆಯೇ ಸಂಕೀರ್ಣ ಋಣ ಅಯಾನು ಮತ್ತು ವಿದ್ಯುದ್ರಹಿತ ಸಂಕೀರ್ಣಗಳೂ ಉಂಟು. ಸಂಕೀರ್ಣದ ವಿದ್ಯುಚ್ಚಿಹ್ನೆ ಆ ಸಂಕೀರ್ಣದಲ್ಲಿರುವ ಎಲ್ಲ ಗುಂಪುಗಳ ಒಟ್ಟು ವಿದ್ಯುದಾವೇಶವನ್ನವಲಂಬಿಸುತ್ತದೆ. ಉದಾಹರಣೆಗೆ,  [ಅo(ಓಊ3)6]3+ [ಅo(ಓಊ3)5ಅಟ]2 + ಮತ್ತು   [ಅo(ಓಊ3)4ಅಟ2]+  ಸಂಕೀರ್ಣ ಧನ ಅಯಾನುಗಳು. [ಅo(ಓಊ3)2ಅಟ4]- ಇತ್ಯಾದಿ ಸಂಕೀರ್ಣ ಋಣ ಅಯಾನುಗಳು. [ಅo(ಓಊ3)3ಅಟ3] ಒಂದು ವಿದ್ಯುದ್ರಹಿತ ಸಂಕೀರ್ಣ, ಇಂಥ ಸಂಕೀರ್ಣ ಅಯಾನುಗಳು ಬೇರೆಬೇರೆ ಅಯನುಗಳ ಸಂಗಡ ಸೇರಿ ವಿಧವಿಧವಾದ ಕೋಆರ್ಡಿನೇಷನ್ ಸಂಯುಕ್ತಗಳಾಗುತ್ತವೆ. ಉದಾಹರಣೆಗೆ, ಏ4[ಈe(ಅಓ)6], [ಅu(ಓಊ3)4]Sಔ4,  [ಅಡಿ (ಓಊ3)6]   [ಅo(ಅಓ)6]  ಇತ್ಯಾದಿ. ಈ ತರಹದ ಕೋಆರ್ಡಿನೇಷನ್ ಸಂಯುಕ್ತಗಳಿಗೆ ಸಂಕೀರ್ಣಗಳು ಅಥವಾ ವರ್ನರ್ ಸಂಕೀರ್ಣಗಳು ಎಂದು ಹೆಸರುಂಟು. ಇಂಥ ಕೆಲವು ಸಂಯುಕ್ತಗಳನ್ನು 18ನೆಯ ಶತಮಾನದ ಕೊನೆಯಲ್ಲಿಯೆ ಗುರುತಿಸಲಾಗಿತ್ತು. ಆದರೆ ಆಗ ಪ್ರಚಲಿತವಾಗಿದ್ದ ರಾಸಾಯನಿಕ ಬಂಧನಗಳ (ಕೆಮಿಕಲ್ ಬೈಂಡಿಂಗ್) ನಿಯಮದ ಪ್ರಕಾರ ಈ ವಸ್ತುಗಳನ್ನು ವರ್ಣಿಸಲಾಗುತ್ತಿರಲಿಲ್ಲ. ಆಗ ಇಂಥ ಸಂಯುಕ್ತದ ಜನಕವಸ್ತುಗಳನ್ನು ಪಕ್ಕಪಕ್ಕದಲ್ಲಿ ಬರೆದು ಇವನ್ನು ಗುರುತಿಸುತ್ತಿದ್ದರು. ಉದಾಹರಣೆಗೆ 2ಏಅಟ.ಊgಅಟ2 ಮತ್ತು  2ಏಅಟ.ಒgಅಟ2 ಆದರೆ ಇವೆರಡೂ ಒಂದೇ ಬಗೆಯ ಸಂಯುಕ್ತಗಳಲ್ಲ. 2ಏಅಟ.ಒgಅಟ2 ಎಂಬುದು ಒಂದು ದ್ವಿಲವಣ (ಡಬಲ್ ಸಾಲ್ಟ್). ನೀರಿನ ದ್ರಾವಣದಲ್ಲಿ ಇದರ ಒಂದು ಅಣು 7 ಅಯಾನುಗಳನ್ನು ಕೊಡುವುದು. 2ಏಅಟ.ಒgಅಟ2 ಎಂಬುದು ನಿಜವಾದ ಕೋಆರ್ಡಿನೇಷನ್ ಸಂಯುಕ್ತ. ಇದರಲ್ಲಿ ನಾಲ್ಕೂ ಕ್ಲೋರೈಡ್ ಅಯಾನುಗಳು ಪಾದರಸದ ಪರಮಾಣುವಿಗೆ ಬಲವಾಗಿ ಬಂಧಿತವಾಗಿದ್ದು  [ಊgಅಟ4]2- ಎಂಬ ಸಂಕೀರ್ಣ ಅಯಾನು (ಕಾಂಪ್ಲೆಕ್ಸ್ ಅಯಾನ್) ಆಗಿರುತ್ತವೆ. ಆದ್ದರಿಂದ ಈ ಸಂಯುಕ್ತದ ಒಂದು ಅಣು ನೀರಿನಲ್ಲಿ 3 ಅಯಾನುಗಳನ್ನು ಕೊಡುತ್ತದೆ. ರಾಸಾಯನಿಕ ಪರೀಕ್ಷೆಗಳಲ್ಲಿ ಇದರ ಕ್ಲೋರೈಡ್ ಅಯಾನು ಸುಲಭವಾಗಿ ಪತ್ತೆಯಾಗುವುದಿಲ್ಲ.

ಈ ಸಂಕೀರ್ಣ ವಸ್ತುಗಳಲ್ಲಿನ ರಾಸಾನಿಕ ಬಂಧವನ್ನು ವರ್ಣಿಸಲು ಆಲ್‍ಫ್ರೆಡ್ ವರ್ನರ್ ಹೊಸದೊಂದು ಕೋಆರ್ಡಿನೇಷನ್ ವಾದವನ್ನು ಮುಂದಿಟ್ಟ(1893). ಇದರ ಪ್ರಕಾರ ಧಾತುಗಳಿಗೆ ಸಾಮಾನ್ಯ ಅಥವಾ ಪ್ರಾಥಮಿಕ ವೇಲೆನ್ಸಿಯಲ್ಲದೆ ಉಳಿಕೆಯ ಅಥವಾ ದ್ವಿತೀಯಕ ಇರುತ್ತದೆ. ಮೇಲಿನ ಉದಾಹರಣೆಯಲ್ಲಿ ಪಾದರಸದ ಪ್ರಾಥಮಿಕ ಮತ್ತು ದ್ವಿತೀಯಕ ವೇಲೆನ್ಸಿ ಅನುಕ್ರಮವಾಗಿ 2 ಮತ್ತು 4.
ವೇಲೆನ್ಸಿಯನ್ನು ಕುರಿತ ಎಲೆಕ್ಟ್ರಾನ್‍ವಾದವನ್ನು ಉಪಯೋಗಿಸಿಕೊಂಡು ಜಿ.ಎನ್.ಲೂಯಿಸ್ ಮತ್ತು ಎನ್.ವಿ.ಸಿಡ್ಜ್ ವಿಕ್ ಎಂಬುವರು 20ನೆಯ ಶತಮಾನದ ಎರಡನೆಯ ದಶಕದಲ್ಲಿ ಕೋಆರ್ಡಿನೇಷನ್ ಸಂಯುಕ್ತಗಳಲ್ಲಿನ ಬಂಧಗಳನ್ನು ಮುಂದೆ ಬರೆದಿರುವಂತೆ ವರ್ಣಿಸಿದರು. ಮಧ್ಯದ ಪರಮಾಣುವಿನ ಹೊರಚಿಪ್ಪಿನಲ್ಲಿ (ಔಟರ್‍ಶೆಲ್) ಎಲೆಕ್ಟ್ರಾನುಗಳು ಪೂರ್ತಿಯಾಗಿ ತುಂಬಿರುವುದಿಲ್ಲ. ಬಿಡಿ ಎಲೆಕ್ಟ್ರಾನ್ ಜೋಡಿ ಇರುವಂಥ ಅಯಾನ್ ಮತ್ತು ಅಣುಗಳು ತಮ್ಮ ಎಲೆಕ್ಟ್ರಾನ್ ಜೋಡಿಯನ್ನು ಎಲೆಕ್ಟ್ರಾನ್ ಅಭಾವ ಇರುವ ಪರಮಾಣುವಿನೊಂದಿಗೆ ಹಂಚಿಕೊಳ್ಳಬಲ್ಲವು. ಆಗ ಉಂಟಾಗುವ ರಾಸಾಯನಿಕ ಬಂಧಕ್ಕೆ ಕೋಆರ್ಡಿನೇಟ್ ಅಥವಾ ಡೇಟಿವ್ ಬಂಧನ ಎಂದು ಹೆಸರು. ಬಿಡಿ ಎಲೆಕ್ಟ್ರಾನ್ ಜೋಡಿ ಇರುವ ಪರಮಾಣುವಿಗೆ ದಾನಿಪರಮಾಣು (ಡೋನರ್ ಆಟಂ) ಎಂದೂ ಮಧ್ಯದ ಪರಮಾಣುವಿಗೆ ಪರಿಗ್ರಾಹಿ ಪರಮಾಣು (ಅಕ್ಸೆಪ್ಟರ್ ಆಟಂ) ಎಂದೂ ಹೆಸರು. ಮೇಲ್ಕಂಡ  [ಊgಅಟ4]= ಸಂಕೀರ್ಣ ಅಯಾನಿನಲ್ಲಿ ನಾಲ್ಕು ಕ್ಲೋರೈಡುಗಳು ದಾನಿ ಪರಮಾಣುಗಳು. ಪಾದರಸ ಪರಿಗ್ರಾಹಿ ಪರಮಾಣು. ಹೀಗೆ ತನ್ನ ಬಿಡಿ ಎಲೆಕ್ಟ್ರಾನ್ ಜೋಡಿಯನ್ನು ದಾನಕೊಡಬಲ್ಲ ಅಣು ಅಥವಾ ಅಯಾನುಗಳಿಗೆ ಲಿಗ್ಯಾಂಡ್ ಎಂದು ಹೆಸರು.

ಅಣು ರಚನೆಯ ಹೆಚ್ಚು ವಿವರಗಳು ತಿಳಿದು ಬಂದಂತೆ ಈ ಸಂಕೀರ್ಣಗಳಲ್ಲಿನ ಬಂಧನಗಳನ್ನು ವರ್ಣಿಸಲು ಹೊಸ ವಾದಗಳು ಮಂಡಿಸಲ್ಪಟ್ಟಿವೆ. ಇವನ್ನು ಸ್ಥೂಲವಾಗಿ ಮೂರು ಭಾಗ ಮಾಡಬಹುದು: 1. ವೇಲೆನ್ಸ್ ಬಂಧವಾದ, 2. ಸ್ಫಟಿಕಕ್ಷೇತ್ರ (ಕ್ರಿಸ್ಟಲ್ ಫೀಲ್ಡ್) ವಾದ, 3. ಅಣುಕಕ್ಷಕ (ಮಾಲಿಕ್ಯೂಲರ್ ಅರ್ಬಿಟಲ್) ವಾದ.
1. ವೇಲೆನ್ಸ್ ಬಂಧ (ಬಾಂಡ್) ವಾದ: ಪರಿಗ್ರಾಹಿ ಪರಮಾಣುವಿನ ಸುತ್ತಲೂ ಇರುವ ಪರಮಾಣು ಕಕ್ಷಕಗಳಲ್ಲಿ ಕೆಲವು ಒಂದಕ್ಕೊಂದು ಸೇರಿ ಅಷ್ಟೇ ಸಂಖ್ಯೆಯ ಸಂಕರ(ಹೈಬ್ರಿಡ್) ಕಕ್ಷಕಗಳಾಗುತ್ತವೆ. ಇವು ಶಕ್ತಿಯಲ್ಲಿಯೂ ಅಕಾಶದಲ್ಲಿ ಪಡೆಯುವ ದಿಕ್ಕುಗಳಲ್ಲಿಯೂ ಪರಮಾಣು ಕಕ್ಷಕಗಳಿಗಿಂತ ಭಿನ್ನವಾಗಿರುತ್ತವೆ.  ಕೋಆರ್ಡಿನೇಟ್ ಬಂಧವನ್ನುಂಟು ಮಾಡುವ ಎಲೆಕ್ಟ್ರಾನ್‍ಗಳು ಈ ಸಂಕರ ಕಕ್ಷಕಗಳನ್ನು ಆಕ್ರಮಿಸಿಕೊಳ್ಳುತ್ತವೆ.

2. ಸ್ಫಟಿಕಕ್ಷೇತ್ರವಾದ : ಲಿಗ್ಯಾಂಡ್‍ಗಳು ವಿದ್ಯುದಾವಿಷ್ಟವಿರುವ ಬಿಂದುಗಳು ಅಥವಾ ದ್ವಿಧ್ರುವಗಳೆಂದು (ಡೈಪೋಲ್) ಎಣಿಸುವುದರಿಂದ ಇಲ್ಲಿ ಮಧ್ಯದ ಪರಮಾಣು ಒಂದು ವಿದ್ಯುತ್ ಕ್ಷೇತ್ರದಲ್ಲಿ ಇರಿಸಲ್ಪಟ್ಟಿದೆ ಎಂದು ತಿಳಿಯುತ್ತಾರೆ. ಇದರಿಂದ ಮಧ್ಯ ಪರಮಾಣುವಿನ ಗಾತ್ರ, ವಿದ್ಯುದಾವಿಷ್ಟ, ಲಿಗ್ಯಾಂಡ್‍ಗಳ ಗಾತ್ರ ಅವುಗಳ ವಿದ್ಯುದಾವಿಷ್ಟ, ದ್ವಿಧ್ರುವ ಭ್ರಮಣಾಂಕ, ಧ್ರುವೀಕರಣ ಆಗುವ ಶಕ್ತಿ, ಆಕಾಶದಲ್ಲಿ ಲಿಗ್ಯಾಂಡ್‍ಗಳು ತೆಗೆದುಕೊಳ್ಳುವ ಸ್ಥಾನ-ಇವೇ ಸಂಕೀರ್ಣದ ಗುಣಗಳನ್ನು ನಿರ್ಧರಿಸುವ ಅಂಶಗಳು ಎಂಬುದು ಈ ವಾದದ ತಿರುಳು.
3. ಅಣುಕಕ್ಷಕವಾದ : ದಾನಿ ಪರಮಾಣು ಪರಿಗ್ರಾಹಿ ಪರಮಾಣುವನ್ನು ಸಮೀಪಿಸುತ್ತಿದ್ದಂತೆಯೇ ಮೊದಲು ಇದ್ದ ಎರಡೂ ಪರಮಾಣುಗಳ ಪರಮಾಣು ಕಕ್ಷಕಗಳು ಹೊಸ ಅಣುಕಕ್ಷಕಗಳಾಗಿ ಎರಡೂ ಪರಮಾಣುಗಳಿಗೆ ಉಭಯಸಾಮನ್ಯವಾಗುತ್ತವೆ. ಬಂಧಕಾರಕಗಳಾದ ಎಲೆಕ್ಟ್ರಾನ್‍ಗಳು ಈ ಅಣುಕಕ್ಷಕಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ. ವೇಲೆನ್ಸ್ ಬಂಧ ಮತ್ತು ಸ್ಫಟಿಕಕ್ಷೇತ್ರ ಇವೆರಡರ ಅಂಶಗಳನ್ನು ಒಳಗೊಂಡಿರುವ ಈ ವಾದ ನಿಜಸ್ಥಿತಿಗೆ ಹೆಚ್ಚು ಹತ್ತಿರವಾಗಿದೆ.

ಸಾಮಾನ್ಯವಾಗಿ ಲಿಗ್ಯಾಂಡ್‍ಗಳಲ್ಲಿರುವ ದಾನಿ ಪರಮಾಣುಗಳು ಹ್ಯಾಲೊಜೆನ್‍ಗಳು ಆಮ್ಲಜನಕ, ಸಾರಜನಕ, ಗಂಧಕ, ರಂಜಕ ಇತ್ಯಾದಿ ಮುಖ್ಯವಾದ ಲಿಗ್ಯಾಂಡ್‍ಗಳು
ಖ:S:ಖ  [:ಅ : : :ಓ :]  ಇತ್ಯಾದಿ. ಇದಲ್ಲದೆ   ಎಲೆಕ್ಟ್ರಾನ್ ಸಾಂದ್ರತೆ ಹೆಚ್ಚಿರುವ ಓಲಿಫೈನ್ ಮತ್ತು ಆರೋಮ್ಯಾಟಿಕ್ ಸಂಯುಕ್ತಗಳೂ ಲಿಗ್ಯಾಂಡ್‍ಗಳಾಗಿರುವುದುಂಟು. ಒಂದೇ ಕೋಆರ್ಡಿನೇಷನ್ ಸಂಯುಕ್ತದಲ್ಲಿ ಬೇರೆ ಬೇರೆ ಲಿಗ್ಯಾಂಡ್‍ಗಳೂ ಇರಬಹುದು. ಉದಾಹರಣಗೆ 

[ಅo(ಓಊ3)5ಅಟ]2 + [ಅo(ಓಊ3)4(ಊ2ಔ)ಅಟ]2 +
ಇಂಥ ಸಂಯುಕ್ತಗಳಿಗೆ ಮಿಶ್ರಸಂಕೀರ್ಣಗಳು (ಮಿಕ್ಸೆಡ್ ಕಾಂಪ್ಲೆಕ್ಸಸ್ ಎಂದು ಹೆಸರು. ಒಂದು ಪರಿಗ್ರಾಹಿ ಪರಮಾಣುವಿನೊಡನೆ ಬಂಧಿತವಾಗಬಹುದಾದ ಲಿಗ್ಯಾಂಡ್‍ಗಳ ಪರಮೋಚ್ಚಸಂಖ್ಯೆಗೆ ಈ ಪರಿಗ್ರಾಹಿ ಪರಮಾಣುವಿನ ಕೋಆರ್ಡಿನೇಷನ್ ಸಂಖ್ಯೆ ಎಂದು ಹೆಸರು. ಸಿಡ್ಜ್‍ವಿಕ್‍ನ ಪ್ರಕಾರ ಇದು ಆ ಪರಿಗ್ರಾಹಿ ಪರಮಾಣುವಿನ ಅಣು ಸಂಖ್ಯೆಯನ್ನು ಅವಲಂಬಿಸಿದೆ. ಜಲಜನಕಕ್ಕೆ 2,2-9 ವರೆಗಿನ ಅಣುಸಂಖ್ಯೆಯ ಮೂಲವಸ್ತುಗಳಿಗೆ 4,11-35 ವರೆಗಿನ ಅಣುಸಂಖ್ಯೆಯ ಮೂಲ ವಸ್ತುಗಳಿಗೆ 6, ಅದಕ್ಕಿಂತ ಭಾರವಾದ ಧಾತುಗಳಿಗೆ 8. ಆದರೆ ಈ ಭಾರವಾದ ಧಾತುಗಳು ತಮ್ಮ ಅತಿ ಹೆಚ್ಚಿನ ಕೋಆರ್ಡಿನೇಷನ್ ಸಂಖ್ಯೆಯನ್ನು ಅನೇಕ ವೇಳೆ ಮುಟ್ಟುವುದೇ ಇಲ್ಲ. ಉದಾಹರಣೆಗೆ : [Pಣ(ಓಊ3)6]ಅಟ4 ಸಂಯುಕ್ತದಲ್ಲಿ ಪ್ಲಾಟಿನಂನ ಕೋಆರ್ಡಿನೇಷನ್ ಸಂಖ್ಯೆ 6 ಮಾತ್ರ. ಅಪೂರ್ವವಾಗಿ ಒಂದು ಸಂಯುಕ್ತ ವಸ್ತುವಿನಲ್ಲಿ ತನ್ನ ಕೋಆರ್ಡಿನೇಷನ್ ಸಂಖ್ಯೆಯನ್ನು ಮೀರಿದ ಲಿಗ್ಯಾಂಡ್‍ಗಳು ಬಂಧಿತವಾಗಿರುವುದೂ ಉಂಟು. ಉದಾಹರಣೆಗೆ ಅಚಿಅಟ28ಓಊ3 ರಲ್ಲಿ ಕ್ಯಾಲ್ಸಿಯಂನ ಕೋಆರ್ಡಿನೇಷನ್ ಸಂಖ್ಯೆ 8.

ದಾನಿ ಪರಮಾಣು ತನ್ನ ಬಿಡಿ ಎಲೆಕ್ಟ್ರಾನ್ ಜೋಡಿಯನ್ನು ಪರಿಗ್ರಾಹಿ ಪರಮಾಣುವಿನೊಂದಿಗೆ ಹಂಚಿಕೊಂಡಾಗ ಪರಿಗ್ರಹಿ ಪರಮಾಣುವಿನ ಹೊರಚಿಪ್ಪಿನಲ್ಲಿ ಎಲೆಕ್ಟ್ರಾನ್‍ಗಳ ಸಂಖ್ಯೆ ಹೆಚ್ಚಾಗುತ್ತದೆ. ಪರಿಗ್ರಾಹಿ ಪರಮಾಣು ತನ್ನ ಮುಂದಿನ ಜಡಅನಿಲದ ಪರಮಾಣುರಚನೆಯನ್ನು ಪಡೆಯುವಷ್ಟು ಎಲೆಕ್ಟ್ರಾನ್‍ಗಳನ್ನು ಸ್ವೀಕರಿಸಿದಾಗ ರೂಪಿತವಾದ ಕೋಆರ್ಡಿನೇಷನ್ ಸಂಯುಕ್ತ ಬಹಳ ಸ್ಥಿರವಾಗಿರುತ್ತದೆ ಎಂಬ ಅಭಿಪ್ರಾಯ ಒಂದುಂಟು. ಉದಾಹರಣೆಗೆ 

 ಅo3+ನ ಸುತ್ತಲೂ ಇರುವ ಎಲೆಕ್ಟ್ರಾನ್‍ಗಳ ಸಂಖ್ಯೆ           ,,,,,,,,  24
6ಓಊ3 ಗಳು ಕೊಡುವ ಎಲೆಕ್ಟ್ರಾನ್‍ಗಳ ಸಂಖ್ಯೆ               ,,,,,,,,  12
[ಅo(ಓಊ3)6]3+ ನಲ್ಲಿ ಅo3+ನ ಸುತ್ತಲೂ 
ಇರುವ ಎಲೆಕ್ಟ್ರಾನ್ ಗಳ ಸಂಖ್ಯೆ                         ,,,,,,,   36
ಇದು ಕ್ರಿಪ್ಟಾನಿನ ಸುತ್ತಲೂ ಇರುವ ಎಲೆಕ್ಟ್ರಾನ್‍ಗಳ ಸಂಖ್ಯೆಗೆ ಸಮ. [ಅo(ಓಊ3)6]3+ ಒಂದು  ಸ್ಥಿರವಾದ ಸಂಕೀರ್ಣ ಅಯಾನು. ಆದರೆ ಈ ನಿಯಮ ಸದಾ ಮಾನ್ಯವಲ್ಲ. ಅನೇಕ ಸ್ಥಿರಸಂಕೀರ್ಣಗಳು ಈ ನಿಯಮಕ್ಕೆ ಅಪವಾದವಾಗಿದೆ. ಸಾಮಾನ್ಯವಾಗಿ ಹಗುರವಾದ ಲೋಹಗಳೆಲ್ಲ ಆಮ್ಲಜನಕವನ್ನು ದಾನಿ ಪರಮಾಣುವಾಗಿ ಸ್ವೀಕರಿಸುತ್ತವೆ. ಇದು ಊ2ಔ, ಔಊ-, ಔ=, ಖಔಊ , ಖಔಖ,   ಖ-ಅ-ಖ ಅಥವಾ ಮತ್ತೇನಾದರೂ ಸಂಯುಕ್ತ ರೂಪದಲ್ಲಿರಬಹುದು. ಆವರ್ತ   
				   ||   
  				    ಔ 
ಕೋಷ್ಟಕದಲ್ಲಿ 5ನೆಯ ಗುಂಪಿನಲ್ಲಿರುವ (ಗ್ರೂಪ್) ವೆನೇಡಿಯಂ ಆಮ್ಲಜನಕ ಉಳ್ಳ ಲಿಗ್ಯಾಂಡ್‍ಗಳೊಡನೆ ಬಂಧಿತವಾಗುತ್ತದೆ. ಆದರೆ ಇದು ಅಮೋನಿಯ ಮತ್ತು ಸಯನೈಡುಗಳೊಡನೆಯೂ ಬಂಧಿತವಾಗುತ್ತದೆ. ಆವರ್ತಕೋಷ್ಟಕದಲ್ಲಿ ವೆನೇಡಿಯಂನ ಬಲಕ್ಕಿರುವುದು ಸಾರಜನಕದೊಡನೆ ಸುಲಭವಾಗಿ ಬಂಧಿತವಾಗುವುದು. 5ನೆಯ ಮತ್ತು 6ನೆಯ ಗುಂಪುಗಳಲ್ಲಿನ ಧಾತುಗಳು ಹ್ಯಾಲೈಡ್‍ಗಳ ಜೊತೆಯಲ್ಲಿ ಬಲವಾದ ಸಂಯುಕ್ತಗಳಾಗುತ್ತವೆ.
	ಕೆಲವು ಲಿಗ್ಯಾಂಡ್‍ಗಳಲ್ಲಿ ಒಂದಕ್ಕಿಂತ ಹೆಚ್ಚು ದಾನಿ ಪರಮಾಣುಗಳಿರುತ್ತವೆ. ಉದಾಹರಣೆಗೆ ಅಓ-, ಓಊ2-ಅಊ2-ಅಊ2-ಓಊ2. ಈ ದಾನಿ ಪರಮಾಣುಗಳು ಪಕ್ಕಪಕ್ಕದಲ್ಲಿಯೇ ಇದ್ದು (ಅಥವಾ ಒಂದೇ ಪರಮಾಣು ಎರಡು ಬಿಡಿ ಎಲೆಕ್ಟ್ರಾನ್ ಜೋಡಿಯನ್ನು ಹೊಂದಿದ್ದರೆ) ಈ ಎರಡು ದಾನಿ ಪರಮಾಣುಗಳೂ ಒಂದೇ ಪರಿಗ್ರಾಹಿ ಪರಮಾಣುವಿನೊಂದಿಗೆ ಒಟ್ಟಿಗೇ ಬಂಧಿತವಾಗಿರಲು ಸಾಧ್ಯವಿಲ್ಲ. ಆದರೆ ಇವು ಎರಡು ಬೇರೆ ಬೇರೆ ಪರಿಗ್ರಾಹಿ ಪರಮಾಣುಗಳೊಂದಿಗೆ ಒಂದೇ ಸಲ ಬಂಧಿತವಾಗಬಲ್ಲವು. ಆಗ ಲಿಗ್ಯಾಂಡ್ ಈ ಎರಡು ಪರಿಗ್ರಾಹಿ ಪರಮಾಣುಗಳ ಮಧ್ಯೆ ಸೇತುವೆಯಾಗುತ್ತದೆ.  ಹೀಗೆ ರೂಪಿತವಾಗುವುದು ದ್ವಿಬೀಜ ಸಂಕೀರ್ಣ(ಡೈ ನ್ಯೂಕ್ಲಿಯರ್ ಕಾಂಪ್ಲೆಕ್ಸ್).

ಚಿತ್ರ-ಉದಾಹರಣೆ-1  

ಇವು ಹೀಗೆಯೇ ಬೆಳೆದು ಬಹು ಬೀಜ ಸಂಕೀರ್ಣ (ಪಾಲಿನ್ಯೂಕ್ಲಿಯರ್ ಕಾಂಪ್ಲೆಕ್ಸ್) ಆಗುವುದೂ ಉಂಟು. ಪ್ರಷ್ಯನ್ ಬ್ಲೂ {ಈ{ಈe[ಈe(ಅಓ)6]}} ಮತ್ತು ಫೆರಿಕ್ ಹೈಡ್ರಾಕ್ಸೈಡ್ {ಈeಟಿ(ಓಊ)3ಟಿ(ಊ2ಓ)x  ಇದಕ್ಕೆ  ಒಳ್ಳೆಯ ಉದಾಹರಣೆ. ಫೆರಿಕ್  ಹೈಡ್ರಾಕ್ಸೈಡಿನಲ್ಲಿ ಆಮ್ಲಜನಕದ ಪರಮಾಣು ಸೇತುವೆಯಾಗಿ ಸಂಕೀರ್ಣದ ಅಣು ಮೂರು ಆಯಾಮಗಳಲ್ಲಿಯೂ (ಡೈಮೆನ್ಷನ್ಸ್) ವಿಸ್ತರಿಸುತ್ತದೆ. ಪ್ಲಾಟಿನಂ ಕ್ಲೋರೈಡಿನಲ್ಲಿ ಎರಡೆರಡು ಕ್ಲೋರೈಡುಗಳು ಸೇತುವೆಯಾಗಿ ಈ ಸಂಕೀರ್ಣ ಸರಪಳಿಯಂತೆ ಬೆಳೆಯುತ್ತದೆ.

ಚಿತ್ರ-2

ಒಂದು ಲಿಗ್ಯಾಂಡ್‍ನಲ್ಲಿ ಎರಡು ದಾನಿಪರಮಾಣುಗಳು 1,2 ಅಥವಾ 3 ಪರಮಾಣುಗಳಿಂದ ಬೇರ್ಪಟ್ಟಿದ್ದರೆ ಈ ಎರಡೂ ಪರಮಾಣುಗಳು ಒಂದೇ ಪರಿಗ್ರಾಹಿ ಪರಮಾಣುವಿಗೆ ಒಟ್ಟಿಗೇ ಬಂಧಿತವಾಗಿ 4,5 ಅಥವಾ 6 ಪರಮಾಣುಗಳ ಉಂಗುರರಚನೆ (ರಿಂಗ್ ಸ್ಟ್ರಕ್ಚರ್) ಸಾಧ್ಯವಾಗುತ್ತದೆ. ಉಂಗುರದಲ್ಲಿರುವ ಪರಮಾಣುಗಳ ಸಂಖ್ಯೆ ಇದರಲ್ಲಿ ಮುಖ್ಯ. α-ಅಮೈನೋ ಆಮ್ಲಗಳು ಅu2+ನೊಂದಿಗೆ ಸಂಯುಕ್ತವಾಗುತ್ತದೆ. ಇಲ್ಲಿ ಉಂಗುರದಲ್ಲಿರುವ ಪರಮಾಣುಗಳ ಸಂಖ್ಯೆ 5. β-ಅಮೈನೋ ಆಮ್ಲಗಳು ಅu2+ನೊಂದಿಗೆ 6 ಪರಮಾಣುಗಳ ಉಂಗುರವಿರುವ ಸಂಯುಕ್ತವಾಗುತ್ತದೆ. ಇದು ಮೊದಲನೆಯದಕ್ಕಿಂತ ಕಡಿಮೆ ಸ್ಥಿರತೆಯನ್ನು ಪಡೆದಿರುತ್ತದೆ (- ಮತ್ತು δ-ಅಮೈನೋ ಆಮ್ಲಗಳು ಅu2+ ನೊಂದಿಗೆ ಹೀಗೆ ಉಂಗುರರಚನೆಯನ್ನು ಕೊಡುವುದೇ ಇಲ್ಲ. ಹೀಗೆ ಒಮ್ಮೆಗೇ ಎರಡು ದಾನಿಪರಮಾಣುಗಳ ಮೂಲಕ ಒಂದು ಪರಿಗ್ರಾಹಿ ಪರಮಾಣುವಿನೊಂದಿಗೆ ಬಂಧಿತವಾಗಬಲ್ಲ ಲಿಗ್ಯಾಂಡ್‍ಗಳಿಗೆ ದ್ವಿದಂತಿಗಳು (ಬೈಡೆಂಟೇಟ್ಸ್) ಎಂದೂ ಇಂಥ ಕೋಆರ್ಡಿನೇಷನ್ ಸಂಯುಕ್ತಗಳಿಗೆ ಕೀಲೇಟುಗಳು ಎಂದೂ ಹೆಸರು. ಓಊ2-(ಅಊ2)2-ಓಊ-(ಅಊ2)2-ಓಊ2 ಒಂದು  ತ್ರಿದಂತಿ.(ಟ್ರೈಡೆಂಟೇಟ್). ಹೀಗೆಯೇ ಚತುರ್ದಂತಿ ಇತ್ಯಾದಿ.

ಚಿತ್ರ-3

ಎಥಿಲೀನ್ ಡೈ ಅಮೀನ್ ಟೆಟ್ರ ಅಸೆಟಿಕ್ ಆಮ್ಲದ ಋಣ ಅಯಾನು ಒಂದು ಷಡ್ದಂತಿ. ಪಾಲಿಫಾಸ್ಫೇಟು ಒಂದು ಬಹುದಂತಿ.

ಚಿತ್ರ-4

ಕೀಲೇಟುಗಳಲ್ಲಿನ ಉಂಗುರ ರಚನೆಗಳು ಕೋಆರ್ಡಿನೇಷನ್ ಸಂಯುಕ್ತದ ಸ್ಥಿರತೆಯನ್ನು ಹೆಚ್ಚು ಮಾಡುತ್ತವೆ. ಅಊ3-ಓಊ2 ಸುಲಭವಾಗಿ ಸಂಕೀರ್ಣವಾಗುವುದಿಲ್ಲ. ಆದರೆ ಓಊ2-ಅಊ2-ಅಊ2-ಓಊ2 ಬಹಳ ಸುಲಭವಾಗಿ ಸಂಕೀರ್ಣವನ್ನು ಕೊಡುತ್ತದೆ. [ಅo(ಓಊ2-ಅಊ2-ಅಊ2-ಓಊ2)3]3 ವನ್ನು ಸಾರ ಹೈಡ್ರೊಕ್ಲೋರಿಕ್ ಆಮ್ಲದೊಡನೆ ಕಾಯಿಸಿದಾಗಲೂ ವಿಭಜಿತವಾಗುವುದಿಲ್ಲ. ಸಾಧಾರಣವಾಗಿ ದ್ವಿತೀಯಕ ಅಮೀನುಗಳು ಸಂಕೀರ್ಣವಾಗದಿದ್ದರೂ ಓಊ2-(ಅಊ2)-ಓಊ-(ಅಊ2)2-ಓಊ2 ರಲ್ಲಿಯ ಮೂರು ಸಾರಜನಕಗಳೂ ಭಾರವಾದ ಲೋಹಗಳೊಡನೆ ಬಂಧಿತವಾಗಿ ಜೋಡಿ ಕೀಲೇಟ್ ಉಂಗುರ ರಚನೆಗಳು ರೂಪಿತವಾಗುತ್ತವೆ.
	ಮುಖ್ಯವಾದ ದ್ವಿದಂತಿಗಳೆಂದರೆ ಎಥಿಲೀನ್ ಡೈಅಮೀನ್, 1:3 ಡೈ ಕೀಟೋನ್‍ಗಳು, ಅಮೈನೋ ಆಮ್ಲಗಳ ಋಣ ಅಯಾನುಗಳು ಇತ್ಯಾದಿ. ಎಥಿಲೀನ್ ಅಮೀನ್ ಒಂದು ವಿದ್ಯುದ್ರಹಿತ ಅಣು. ಇದು ಪರಿಗ್ರಾಹಿ ಪರಮಾಣುವಿನ ಧನ ಅಯಾನಿನೊಡನೆ ಬಂಧಿತವಾದಾಗ ಸಂಕೀರ್ಣ ಧನ ಅಯಾನು ರೂಪಿತವಾಗಿ ಸಂಯುಕ್ತಲವಣವಾಗಿರುತ್ತದೆ. ಡೈ ಕೀಟೋನ್‍ಗಳಾಗಲೀ ಅಮೈನೋ ಆಮ್ಲವಾಗಲೀ ಸಂಕೀರ್ಣವಾಗುವಾಗ ಒಂದು ಪ್ರೋಟಾನನ್ನು ಕಳೆದುಕೊಳ್ಳುವುದರಿಂದ ಲಿಗ್ಯಾಂಡ್ ಋಣ ಅಯಾನಿನ ರೂಪದಲ್ಲಿರುತ್ತದೆ. ಇದರಿಂದ ಪರಿಗ್ರಾಹಿ ಪರಮಾಣುವಿನ ಮೇಲಿನ ವಿದ್ಯುದಾವಿಷ್ಟ ಅದರ ಕೋಆರ್ಡಿನೇಷನ್ ಸಂಖ್ಯೆಯ ಅರ್ಧದಷ್ಟಿದ್ದರೆ ಬರುವ ಸಂಕೀರ್ಣ ವಿದ್ಯುದ್ರಹಿತವಾಗಿರುತ್ತದೆ.

 ಚಿತ್ರ-5

ನಾಮಕರಣ (ನಾಮೆನ್‍ಕ್ಲೇಚರ್) : ಸಂಕೀರ್ಣ ಅಯಾನಿಗೆ ಹೆಸರಿಡುವಲ್ಲಿ ಮೊದಲು ಲಿಗ್ಯಾಂಡ್‍ಗಳ ಹೆಸರನ್ನು ಅನುಕ್ರಮವಾಗಿ ಋಣ ಅಯಾನು, ವಿದ್ಯುದ್ರಹಿತ ಅಣು, ಅನಂತರ ಧನ ಅಯಾನುಗಳ ಕ್ರಮದಲ್ಲಿ ಬರೆದು ತರುವಾಯ ಪರಿಗ್ರಾಹಿ ಪರಮಾಣುವನ್ನು ಬರೆದು ಅದರ ಉತ್ಕರ್ಷಣ ಸಂಖ್ಯೆಯನ್ನು ರೋಮನ್ ಸಂಖ್ಯೆಯಲ್ಲಿ ಗುರುತಿಸಬೇಕು. ಉದಾಹರಣೆಗೆ ಡೈಕ್ಲೋರೋ ಡೈ ಅಮೈನೋ ಪ್ಲಾಟಿನಂ (II) ಎಂದರೆ [Pಣ(ಓಊ3)2ಅಟ2].
	ಒಂದು ಕೋಆರ್ಡಿನೇಷನ್ ಸಂಯುಕ್ತದ ಸ್ಥಿರತೆ ಅದರಲ್ಲಿರುವ ಲೋಹದ ಪರಮಾಣು. ಅದರ ಮೇಲಿನ ವಿದ್ಯುದಾವೇಶ, ಅದರ ಗಾತ್ರ, ಅದಕ್ಕಿರುವ ಎಲೆಕ್ಟ್ರಾನ್ ಆಕರ್ಷಣೆ, ಲಿಗ್ಯಾಂಡಿನಲ್ಲಿರುವ ದಾನಿ ಪರಮಾಣು ಅದಕ್ಕಿರುವ, ಎಲೆಕ್ಟ್ರಾನ್ ದಾತೃ ಶಕ್ತಿ, ಕೀಲೇಟ್ ಆಗುವ ಶಕ್ತಿ, ಕೀಲೇಟ್ ಉಂಗುರದಲ್ಲಿರುವ ಪರಮಾಣುಗಳ ಸಂಖ್ಯೆ, ಅವುಗಳಲ್ಲಿರುವ ದ್ವಿಬಂಧಗಳು, ಸ್ಟೆರಿಕ್ ಮತ್ತು ರೆಸೊನೆನ್ಸ್ ಪರಿಣಾಮ- ಇವನ್ನು ಅವಲಂಬಿಸಿರುತ್ತದೆ. ಸಣ್ಣ ಗಾತ್ರದ ಹೆಚ್ಚು ಧ್ರುವೀಕರಣ ಹೊಂದಬಲ್ಲ ಸಂಕ್ರಮಣಲೋಹಗಳು ಸುಲಭವಾಗಿ ಕೋಆರ್ಡಿನೇಷನ್ ಸಂಯುಕ್ತಗಳನ್ನು ಕೊಡುತ್ತವೆ. ಆದರೆ ದೊಡ್ಡ ಗಾತ್ರದ ಗೋಳೀಯ ಸಮಾಂಗತ್ವವಿರುವ (ಸ್ಫೆರಿಕಲಿ ಸಿಮ್ಮೆಟ್ರಿಕ್) ಒಂದು ಧನವಿದ್ಯುದಾವೇಶವಿರುವ ಕ್ಷಾರಲೋಹಗಳು ಸುಲಭವಾಗಿ ಈ ಸಂಯುಕ್ತಗಳನ್ನು ಕೊಡುವುದಿಲ್ಲ. ಈ ಸಂಯುಕ್ತಗಳ ಸ್ಥಿರತೆಯನ್ನು ಸ್ಥಿರತೆಯ ನಿಯತಾಂಕದಿಂದ (ಸ್ಟೆಬಿಲಿಟಿ ಕಾನ್ಸ್‍ಟೆಂಟ್) ಅಥವಾ ರೂಪಣ ನಿಯತಾಂಕದಿಂದ (ಫಾರ್ಮೇಷನ್ ಕಾನ್ಸ್‍ಟೆಂಟ್) ಅಳೆಯುವರು.
	ಒಐಟಿ   ಎಂಬುದು ಸಂಕೀರ್ಣವಾದರೆ ಅದು ಒಂದು ಪರಿಗ್ರಾಹಿ ಪರಮಾಣು, ಒ, ಮತ್ತು  ಟಿ ಸಂಖ್ಯೆಯ ಲಿಗ್ಯಾಂಡ್ ಐ  ಗಳಿಂದ ರೂಪಿತವಾಗಿದೆ ಎಂದು ಬರೆಯಬಹುದು.
ಒ + ಟಿ ಐ( ಒಐ ಟಿ 
        
ಈಗ ಸ್ಥಿರತೆಯ ನಿಯತಾಕ ಞ ಯನ್ನು  
 ಞ  = [ಒಐಟಿ]
     [ಒ][ಐ]ಟಿ                  
ಎಂದು ಬರೆಯಬಹುದು.
	ಅಸ್ಥಿರತೆಯ ನಿಯತಾಂಕ ಞ ಅಸ್ಥಿರ ಅಥವಾ ವಿಯೋಜನ ನಿಯತಾಂಕ ಡಿಸೋಸಿಯೇಷನ್ ಕಾನ್ಸ್‍ಟೆಂಟ್) ಸ್ಥಿರತೆಯ ನಿಯತಾಂಕದ ವಿಲೋಮ ಎಂದರೆ 
      ಞ ಅಸ್ಥಿರ 1/ಞ  
ಸಂಕೀರ್ಣ ಸೂತ್ರ ಮತ್ತು ಸ್ಥಿರತೆಯ ನಿಯತಾಂಕವನ್ನು ಅನೇಕ ವಿಧಾನಗಳಿಂದ ಕಂಡುಹಿಡಿಯಬಹುದು. ಅವುಗಳಲ್ಲಿ ಕೆಲವು (ಚಿ) ಠಿಊ ಅಳೆಯುವುದರಿಂದ,  (b) ರಾಸಾಯನಿಕ ವಿಶ್ಲೇಷಣೆಯಿಂದ, (ಛಿ) ಪೊಲೊರೋಗ್ರಫಿಯ ಅರ್ಧತರಂಗ ವಿಭವದಿಂದ (ಪೊಟೆನ್ಷಿಯಲ್),  (ಜ) ಎಲೆಕ್ಟ್ರೋಡ್ ವಿಭವದಿಂದ, ಸ್ಪೆ(e) ಕ್ಟ್ರೊಫೋಟೋ ಮೆಟ್ರಿಯಿಂದ,  (ಜಿ) ಅಯಾನ್ ವಿನಿಮಯದಿಂದ (g)ರೇಡಿಯೋ ಸಮಸ್ಥಾನಿ ವಿನಿಮಯದಿಂದ,( h) ಎನ್.ಎಂ.ಆರ್ ಅಳತೆಯಿಂದ ಇತ್ಯಾದಿ.
	ಅಣುರಚನೆ ಮತ್ತು ಐಸೊಮೆರಿಸಂ:  1.ಸ್ಟಿರಿಯೋ ಐಸೊಮೆರಿಸಂ: ಸಂಕೀರ್ಣದ ವಿನ್ಯಾಸ ಪರಿಗ್ರಾಹಿ ಪರಮಾಣುವಿನ ಕೋಆರ್ಡಿನೇಷನ್ ಸಂಖ್ಯೆಯನ್ನು ಅವಲಂಬಿಸುತ್ತದೆ. ಸಂಕೀರ್ಣಗಳಲ್ಲಿ ಸಾಧಾರಣವಾಗಿ ಕಂಡುಬರುವ ಕೋಆರ್ಡಿನೇಷನ್ ಸಂಖ್ಯೆಗಳು 4 ಮತ್ತು 6. ಆದರೆ ಅಪೂರ್ವವಾಗಿ 2, 3, 5, 7, 8 ಮತ್ತು ಹೆಚ್ಚಿನ ಕೋಆರ್ಡಿನೇಷನ್ ಸಂಖ್ಯೆಗಳೂ ಇರುವುದುಂಟು. ಕೋಆರ್ಡಿನೇಷನ್ ಬಂಧಗಳು ನಿರ್ದಿಷ್ಟ ದಿಕ್ಕುಗಳಲ್ಲಿ ಮಾತ್ರ ಇರುವುದರಿಂದ ಲಿಗ್ಯಾಂಡ್‍ಗಳು ಪರಿಗ್ರಾಹಿ ಪರಮಾಣುವಿಗೆ ಗೊತ್ತಾದ ದಿಕ್ಕಿನಲ್ಲಿ ಮಾತ್ರ ಇರುವುದು ಸಾಧ್ಯ. ಕೋಆರ್ಡಿನೇಷನ್ ಸಂಖ್ಯೆ 4 ಆದಾಗ ಪರಿಗ್ರಾಹಿ ಪರಮಾಣು ಒಂದು ಚತುಷ್ಫಲಕದ (ಟೆಟ್ರಹಿಡ್ರನ್) ಮಧ್ಯದಲ್ಲಿದ್ದು ನಾಲ್ಕೂ ಲಿಗ್ಯಾಂಡ್‍ಗಳು ಚತುಷ್ಫಲಕದ ನಾಲ್ಕು ಮೂಲೆಗಳಲ್ಲಿರಬಹುದು. ಉದಾಹರಣೆಗೆ ನಿಲ್ ಕಾರ್ಬೊನಿಲ್  ಓi(ಅo)4  ಅಥವಾ ಪರಿಗ್ರಾಹಿ ಪರಮಾಣು ಸಮತಲದಲ್ಲಿ ಒಂದು ಚಚ್ಚೌಕದ ಮಧ್ಯದಲ್ಲಿದ್ದು ನಾಲ್ಕು ಲಿಗ್ಯಾಂಡ್‍ಗಳೂ ಚಚ್ಚೌಕದ ಮೂಲೆಯಲ್ಲಿರಬಹುದು. ಚತುಷ್ಫಲಕದ ನಾಲ್ಕು ಮೂಲೆಗಳೂ ಎಲ್ಲ ರೀತಿಯಲ್ಲಿಯೂ ಸಮವಾಗಿರುವುದರಿಂದ ಸಂಕೀರ್ಣದ ಸಂಯೋಜನೆ ಏನೇ ಆಗಲಿ ಲಿಗ್ಯಾಂಡುಗಳ ಸ್ಥಾನಪಲ್ಲಟ ಮಾಡುವುದರಿಂದ ಜ್ಯಾಮಿತೀಯ ಐಸೋಮರುಗಳನ್ನು ರೂಪಿಸಲಾಗುವುದಿಲ್ಲ. ಆದರೆ ನಾಲ್ಕು ಲಿಗ್ಯಾಂಡುಗಳೂ ಬೇರೆ ಬೇರೆಯಾಗಿದ್ದರೆ ಆಗ ದ್ಯುತಿ (ಆಪ್ಟಿಕಲ್) ಐಸೊಮರುಗಳು ರೂಪಿತವಾಗಲು ಸಾಧ್ಯ. ಆದರೆ ಇಂಥ ಐಸೊಮರುಗಳನ್ನು ಇನ್ನೂ ತಯಾರು ಮಾಡಲಾಗಿಲ್ಲ.
	ಸಮತಲ ಚಚ್ಚೌಕದ ರಚನೆಯಲ್ಲಿ ಸಂಕೀರ್ಣ ಒಚಿ4, ಒಚಿ3b ರೀತಿಯವುಗಳಾದರೆ ಜ್ಯಾಮಿತೀಯ ಐಸೊಮರ್‍ಗಳು ಇರುವುದಿಲ್ಲ. ಆದರೆ ಒಚಿ2b2 ರೀತಿಯ ಸಂಕೀರ್ಣ-ಸಿಸ್ ಮತ್ತು ಟ್ರಾನ್ಸ್-ಎರಡು ರೂಪದಲ್ಲಿರಬಹುದು.

ಚಿತ್ರ-6

	ಎರಡು ಸಂಯುಕ್ತಗಳೂ ಭಿನ್ನವಾಗಿದ್ದು ಕೆಲವು ರಾಸಾಯನಿಕ ಗುಣಗಳಲ್ಲಿ ವ್ಯತ್ಯಾಸವನ್ನು ಪ್ರದರ್ಶಿಸುತ್ತವೆ. ಒಚಿbಛಿಜ ಸಂಕೀರ್ಣ ಮೂರು ಬಗೆಯ ಸಮತಲ ವಿನ್ಯಾಸವನ್ನು ಪಡೆದಿರಬಹುದು.

ಚಿತ್ರ-7

ಸಮತಲ ಚಚ್ಚೌಕದ ಸಂಕೀರ್ಣಗಳಲ್ಲಿ ದ್ವಿದಂತಿ ಲಿಗ್ಯಾಂಡುಗಳಿದ್ದರೆ ಇವು ಸದಾ ಪಕ್ಕಪಕ್ಕದ ಸ್ಥಾನವನ್ನಾಕ್ರಮಿಸ ಬೇಕಾದ್ದರಿಂದ ಇಲ್ಲಿ ಜ್ಯಾವಿತೀಯ ಐಸೊಮರ್ ಸಾಧ್ಯವಿಲ್ಲ. ಆದರೆ ದ್ಯುತಿ ಐಸೊಮರುಗಳು ಸಾಧ್ಯವಾಗಬಹುದು.
	ಕೋಆರ್ಡಿನೇಷನ್ ಸಂಖ್ಯೆ 6 ಆದಾಗ ಲಿಗ್ಯಾಂಡುಗಳು ಒಂದು ಅಷ್ಟಫಲಕದ 6 ಮೂಲೆಗಳಲ್ಲಿ ಇರುತ್ತವೆ. ಆದ್ದರಿಂದ ಒಚಿ6  ಒಚಿ5b, ರೀತಿಯ  ಸಂಕೀರ್ಣಗಳು ಒಂದೇ ರೂಪದಲ್ಲಿರುವುದು ಸಾಧ್ಯ. ಆದರೆ  ಒಚಿ4b2, ಒಚಿ3b3 ರೀತಿಯ ಸಂಕೀರ್ಣಗಳು ಎರಡು ಸ್ಟೀರಿಯೋ ಐಸೊಮರುಗಳಾಗಿ ಇರಲು ಸಾಧ್ಯ.
	ಇಂಥ ಸಂಕೀರ್ಣಗಳಲ್ಲಿ ಒಂದು ದ್ವಿದಂತಿ ಇದ್ದರೆ [ಒ(ಂಂ)ಚಿ4ರೀತಿಯ  ಸಂಕೀರ್ಣ ಒಂದೇ ರೂಪದಲ್ಲಿರಲು ಸಾಧ್ಯ. ಎರಡು ದ್ವಿದಂತಿಗಳಿರುವ [ಒ(ಂಂ)2ಚಿ2 ] ರೀತಿಯ ಸಂಕೀರ್ಣ ಎರಡು ರೂಪದಲ್ಲಿರಬಹುದು.
	ಟ್ರಾನ್ಸ್  ವಿನ್ಯಾಸದಲ್ಲಿ  ಚಿಒಚಿ ಒಂದು sಸಮಾಂಗತ್ವದ ಸಮತಲವಾದ್ದರಿಂದ ಟ್ರಾನ್ಸ್ [ಒ(ಂಂ)2ಚಿ2 ಸಂಕೀರ್ಣದ ಬಿಂಬ ರಚನೆಗಳು ಭಿನ್ನವಾಗಿರುವುದಿಲ್ಲ. ಆದ್ದರಿಂದ ಸಂಕೀರ್ಣದಲ್ಲಿ ದ್ಯುತಿ ಐಸೊಮರ್‍ಗಳು ಇರುವುದಿಲ್ಲ. ಸಿಸ್ ವಿನ್ಯಾಸದಲ್ಲಿ ಈ ಸಮಾಂಗತ್ವ ಇಲ್ಲದಿರುವುದರಿಂದ [ಒ(ಂಂ)2ಚಿ2] ಮತ್ತು ರೀತಿಯ [ಒ(ಂಂ)3] ಸಂಕೀರ್ಣಗಳು ದ್ಯುತಿ ಐಸೊಮರುಗಳನ್ನು ಹೊಂದಿರುತ್ತವೆ.
	ಈ ಸಂಯುಕ್ತಗಳ ಜಟಿಲತೆ ಹೆಚ್ಚಾದ ಹಾಗೆ ಐಸೊಮರ್‍ಗಳ ಸಾಧ್ಯತೆ ಹೆಚ್ಚಾಗುತ್ತದೆ. ಒಚಿbಛಿಜeಜಿ ರೀತಿಯ ಸಂಕೀರ್ಣ 15 ಜೊತೆ ದ್ಯುತಿ ಐಸೊಮರ್ ರೂಪದಲ್ಲಿರಬಹುದು. 2, 3, 5, 7 ಮತ್ತು 8 ಕೋಆರ್ಡಿನೇಟ್ ಸಂಕೀರ್ಣಗಳಲ್ಲಿ ಇರಬಹುದಾದ ಸ್ಟೀರಿಯೋ ರಾಸಾಯನಿಕ ರಚನೆಗಳ ಸಂಖ್ಯೆಗಳನ್ನೆಲ್ಲ ಲೆಕ್ಕ ಹಾಕಿಲ್ಲ. ಈ ಅಪೂರ್ವದ ಕೋಆರ್ಡಿನೇಷನ್ ಸಂಖ್ಯೆಯ ಸಂಕೀರ್ಣಗಳಲ್ಲಿಯೂ ಕೆಲವು ಸ್ಟೀರಿಯೋ ಐಸೊಮರ್‍ಗಳು ಪತ್ತೆಯಾಗಿವೆ.
	2. ರಚನಾತ್ಮಕ ಐಸೊಮರ್‍ಗಳು: ಓಔ2 ಗುಂಪಿನಲ್ಲಿ ಔ ಮತ್ತು ಓ ಎರಡು ದಾನಿಪರಮಾಣುಗಳಿವೆ. ಆದ್ದರಿಂದ ಇದು ಪರಿಗ್ರಾಹಿ ಪರಮಾಣುವಿಗೆ ಎರಡು ರೀತಿಯಲ್ಲಿ ಬಂಧಿತವಾಗಬಹುದು. [ಅo3+(ಓಊ3)5(ಓಔ2)-]  ಕಂದುಬಣ್ಣದ ನೈಟ್ರೋ ಅಮೀನ್, [ಅಔ2 +(ಓಊ3)5(ಔಓಔ)] ಕೆಂಪುಬಣ್ಣದ ನೈಟ್ರಿಟೋ ಅಮೀನಿಗಿಂತ ಹೆಚ್ಚು ಸ್ಥಿರವಾಗಿರುವುದು ಕಂಡುಬಂದಿದೆ.                    ಅಮೀನಿಗಿಂತ ಹೆಚ್ಚು ಸ್ಥಿರವಾಗಿರುವುದು ಕಂಡುಬಂದಿದೆ. ಇದೇ ರೀತಿ [ಅo(ಓಊ3)5ಓಔ3]2+ ಮತ್ತು [ಅo(ಓಊ3)4(ಓಊ2ಔಊ)(ಓಔ2)]2+ ಗಳೆರಡನ್ನೂ ಗುರುತಿಸಲಾಗಿದೆ. 

ಚಿತ್ರ-8

ಧನ ಅಯಾನು, ಋಣ ಅಯಾನು ಎರಡೂ ಸಂಕೀರ್ಣ ಅಯಾನುಗಳಾಗಿ ಅವುಗಳಲ್ಲಿ ಎರಡು ಬಗೆಯ ಲಿಗ್ಯಾಂಡುಗಳಿದ್ದರೆ ಇವು ಎರಡೂ ಅಯಾನುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಹಂಚಿಹೋಗಬಹುದು.  

 ಚಿತ್ರ-9

ಇದರಿಂದ ಹೊಸ ಐಸೊಮರುಗಳು ಸಾಧ್ಯ. [ಅo(ಓಊ3)6]3+[ಅo(ಓಔ2)6]3( ಮತ್ತು [ಅo(ಓಊ3)4(3ಓಔ2)2]([ಅo(ಓಊ3)2(ಓಔ2)4](   ಇವೆರಡೂ ಐಸೊಮರುಗಳು.  ಅದೇ ರೀತಿಯಲ್ಲಿ [ಅo(ಓಊ3)6]3 +[ಅಡಿ(ಅಓ)6]3-ಮತ್ತು [ಅಡಿ(ಓಊ3)6]3([ಅo(ಅಓ)6]3-.	
ಒಂದು ಧನ ಸಂಕೀರ್ಣ ಅಯಾನಿನಲ್ಲಿರುವ ಲಿಗ್ಯಾಂಡ್ ಋಣ ಅಯಾನ್ ಆಗಿದ್ದರೆ ಇದು ಲವಣದ ಋಣ ಅಯಾನಿನೊಡನೆ ಸ್ಥಾನವಿನಿಮಯ ಮಾಡಿಕೊಂಡಾಗ ಹೊಸ ಐಸೊಮರ್ ಸಾಧ್ಯವಾಗುತ್ತದೆ.	

[ಅo3+(ಓಊ3)5Sಔ4=]ಃಡಿ(   ಮತ್ತು [ಅo3+(ಓಊ3)5ಃಡಿ( ] Sಔ4= ಮೊದಲನೆಯ ಐಸೊಮರ್‍ನಲ್ಲಿ ಃಡಿ( ನ್ನು ಪತ್ತೆ ಮಾಡುವುದು ಸುಲಭ.  ಎರಡನೆಯದರಲ್ಲಿ Sಔ4= ಸುಲಭವಾಗಿ ಪತ್ತೆಯಾಗುತ್ತದೆ. [ಅಡಿ(ಊ2ಔ)6ಅಟ3,  [ಅಡಿ(ಊ2ಔ) ಅಟ]ಅಟ 2.ಊ2ಔ ಮತ್ತು [ಅಡಿ(ಊ2ಔ)4ಅಟ2]ಅಟ.  2 ಊ2ಔ ಈ ಮೂರು ಸಂಯುಕ್ತಗಳನ್ನೂ ಗುರುತಿಸಲಾಗಿದೆ.	

ಕೆಲವು ಮುಖ್ಯವಾದ ಕೋಆರ್ಡಿನೇಷನ್ ಸಂಯುಕ್ತಗಳು:  ರಕ್ತದಲ್ಲಿರುವ ಹೀಮೊಗ್ಲಾಬಿನ್ ಮತ್ತು ಎಲೆಗಳಲ್ಲಿರುವ ಪತ್ರಹರಿತ್ತು.  ವಿಟಮಿನ್ ಬಿ12 ಇವು ಮುಖ್ಯ ವಾದ ಪ್ರಕೃತಿಸಿದ್ಧ ಕೋಆರ್ಡಿನೇಷನ್ ಸಂಯುಕ್ತಗಳು. ಥಾಲೋಸಯನಿನ್ ಇದೇ ಬಗೆಯ ಕೃತಕ ಕೋಆರ್ಡಿನೇಷನ್ ಸಂಯುಕ್ತ. ಲೋಹದ ಕಾರ್ಬೊನಿಲ್‍ಗಳಲ್ಲಿ ವಿಶೇಷ ರೀತಿಯ ರಾಸಾಯನಿಕ ಬಂಧಗಳಿರುವುದರಿಂದ ಇವು ತಾತ್ತ್ವಿಕವಾಗಿ ಮಹತ್ವದ್ದೆನಿಸಿದೆ. ಇವುಗಳಲ್ಲಿ ಅನೇಕವು ಸುಲಭವಾಗಿ ಬಾಷ್ಪೀಕೃತವಾಗುವುದರಿಂದ ಇವನ್ನು ಕೆಲವು ಲೋಹಗಳ ಶುದ್ದೀಕರಣದಲ್ಲಿಯೂ ಉಪಯೋಗಿಸುವರು. ಅಸಂತೃಪ್ತ ಮತ್ತು ಆರೋಮ್ಯಾಟಿಕ್ ಸಂಯುಕ್ತಗಳು ಅನೇಕ ಲೋಹಗಳೊಡನೆ ಕೋಆರ್ಡಿನೇಟ್ ಸಂಯುಕ್ತಗಳಾಗುತ್ತವೆ. ಇವು ಈಚೆಗೆ ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಫೆರೊಸೀನ್ ಈ ಬಗೆಯ ಸಂಯುಕ್ತಗಳಲ್ಲಿ ಒಂದು ಮುಖ್ಯವಾದ ವಸ್ತು. ಚರ್ಮಹದಮಾಡುವಾಗ, ಪೆಟ್ರೋಲಿಯಂ, ರಬ್ಬರ್, ಪೆಯಿಂಟ್ ಮುಂತಾದ ಕೈಗಾರಿಕೆಗಳಲ್ಲಿ ಕೋಆರ್ಡಿನೇಷನ್ ಸಂಯುಕ್ತಗಳ ಪಾತ್ರ ಮುಖ್ಯವಾದದ್ದು.						(ಎಸ್.ಕೆ.ವಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ